ಜ್ಞಾನಸಂಗಮ ಟ್ರಸ್ಟ್(ರಿ.)
"ಜ್ಞಾನಸಂಗಮ ಟ್ರಸ್ಟ್(ರಿ.)" ಬ್ರಹ್ಮಾವರ ಇದು ದಿನಾಂಕ 30/12/2024ರಂದು ನೋಂದಣಿಗೊಂಡಿದೆ. ಇದನ್ನು ಶ್ರೀ ಮಹೇಶ ತಡೆಕಲ್ಲು ಹಾಗು ಶ್ರೀ ಪ್ರಜೀತ್ ಕುಮಾರ್ ಸೇರಿಕೊಂಡು ಆರಂಭಿಸಿದರು. ಈ ಟ್ರಸ್ಟ್ನ ಉದ್ಧೇಶ "ವಿದ್ಯಾರ್ಥಿಗಳ ಸಬಲೀಕರಣ ಹಾಗು ಕಲ್ಯಾಣಕ್ಕಾಗಿ."
ಜ್ಞಾನಸಂಗಮ ಟ್ರಸ್ಟ್(ರಿ.) ಇದರ ಉದ್ಘಾಟನೆಯನ್ನು ಫೆಬ್ರವರಿ 22, 2025 ರಂದು ಎಸ್.ಎಮ್.ಎಸ್. ಪದವಿ ಕಾಲೇಜು, ಬ್ರಹ್ಮಾವರದಲ್ಲಿ ಆಗಮಿಸಿದ ಅತಿಥಿಗಳು ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ದೀಪ ಬೆಳಗುವುದರೊಂದಿಗೆ ನೆರವೇರಿಸಿದರು. ಆ ಕಾರ್ಯಕ್ರಮದ ಪ್ರಯುಕ್ತ ಉಡುಪಿ ಜಿಲ್ಲೆಯ ಪದವಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ "ರಸಪ್ರಶ್ನೆ ಸ್ಪರ್ಧೆ" ಆಯೋಜಿಸಲಾಗಿತ್ತು. ಉಡುಪಿ ಜಿಲ್ಲೆಯ ಒಟ್ಟು 14 ಕಾಲೇಜುಗಳ ವಿದ್ಯಾರ್ಥಿಗಳು ಸ್ಪಧರ್ಸಿದರು. ಹಾಗೆಯೇ ಅಂದು ಶ್ರೀ ಮಹೇಶ ತಡೆಕಲ್ಲು ಅವರು ಬರೆದ "ಮುನ್ನ" ಕಾಲ್ಪನಿಕ ಕಥಾಹಂದರದ ಕಾದಂಬರಿಯನ್ನು ಅತಿಥಿಗಳು ಅನಾವರಣಗೊಳಿಸಿದರು.
ಜ್ಞಾನಸಂಗಮ ಟ್ರಸ್ಟ್(ರಿ.) ಅಂದು ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ಫಲಕದ ಜೊತೆಗೆ ನಗದು ಬಹುಮಾನವನ್ನು ನೀಡಲಾಗಿತ್ತು ಹಾಗು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗಿತ್ತು.
ಜ್ಞಾನಸಂಗಮ ಟ್ರಸ್ಟ್(ರಿ.) ಮುಂದಿನ ದಿನಗಳಲ್ಲಿಯೂ ಕೂಡ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸದುಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಉತ್ಸುಕವಾಗಿದೆ. ಸಮಯ ಕೂಡಿ ಬಂದಾಗ ಅದು ಸಾಕಾರಗೊಳ್ಳುವುದು ಎಂದು ನಾವು ನಂಬಿದ್ದೇವೆ.
"ಸರ್ವೇ ಜನಾ: ಸುಖಿನೋ ಭವಂತು."