ಪತ್ರಿಕೆ ಕುರಿತು

ವಿದ್ಯಾರ್ಥಿಗಳಲ್ಲಿರುವ ಬರವಣಿಗೆಯ ಕಲೆಯನ್ನು ಸಾರ್ವಜನಿಕರಿಗೆ ತಲುಪಿಸುವ ವೇದಿಕೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಒಬ್ಬ ವ್ಯಕ್ತಿಗೆ ತನ್ನ ಮನಸ್ಸಿನ ಭಾವನೆಗಳನ್ನು ಯಾವುದೇ ಮುಚ್ಚುಮರೆಯಿಲ್ಲದೇ ಹೊರಹಾಕಲು ಇರುವ ಪ್ರಮುಖ ಸಾಧನವೆಂದರೆ ಬರವಣಿಗೆ.

ಶಾಲಾ-ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಹಲವರಿಗೆ ಕಥೆ, ಕವನ, ಲೇಖನಗಳನ್ನು ಬರೆಯುವ ಹವ್ಯಾಸವಿರುತ್ತದೆ. ಆದರೆ ಕೆಲವರಿಗೆ ತಮ್ಮ ಲೇಖನಗಳನ್ನು ಪ್ರಕಟಿಸಲು ಸರಿಯಾದ ವೇದಿಕೆ ಸಿಗುವುದಿಲ್ಲ. ವಿದ್ಯಾರ್ಥಿ ದೆಸೆಯಲ್ಲಿಯೇ ತಮ್ಮ ಬರವಣಿಗೆಗೆ ಉತ್ತಮ ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಅದುವೇ ಕೆಲವರಿಗೆ ಜೀವನ ಕಟ್ಟಿಕೊಡಬಹುದು ಎನ್ನುವುದು ನಮ್ಮ ಅನಿಸಿಕೆ.

ಹಾಗಾಗಿ ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರ(ಪತ್ರಿಕಾ ಚಂದಾದಾರರ) ಬರವಣಿಗೆಯ ಸಾಮರ್ಥ್ಯವನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಸಲುವಾಗಿ, ಜ್ಞಾನಸಂಗಮ ಟ್ರಸ್ಟ್(ರಿ.) ಬ್ರಹ್ಮಾವರ ಇದರ ಸಂಸ್ಥಾಪಕರು ಸಂಬಂಧಪಟ್ಟ ಸರ್ಕಾರಿ ಇಲಾಖೆಯಿಂದ ಪರವಾನಿಗೆ ಪಡೆದು "ಯುವ ಕರಾವಳಿ" ಶೀರ್ಷಿಕೆಯ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು.

ಒಂದೊಂದು ಸಂಚಿಕೆಯಲ್ಲಿ ಒಂದೊಂದು ಕಾಲೇಜಿನ ಬಗ್ಗೆ ಪ್ರಕಟಿಸಲಾಗುವುದು. ಆಯಾ ಕಾಲೇಜಿನ ವಿದ್ಯಾರ್ಥಿಗಳ ಲೇಖನಗಳ ಜೊತೆಗೆ ಬೇರೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಲೇಖನಗಳನ್ನು ವಿದ್ಯಾರ್ಥಿ ವೇದಿಕೆಯಲ್ಲಿ ಹಾಗು ಪತ್ರಿಕೆಯ ಚಂದಾದಾರರ(ಸಾರ್ವಜನಿಕರ) ಲೇಖನಗಳನ್ನು ಸಾರ್ವಜನಿಕ ವೇದಿಕೆಯಲ್ಲಿಯೂ ಪ್ರಕಟಿಸಲಾಗುತ್ತದೆ. ಪತ್ರಿಕೆಯು ಸಮಾಜದಲ್ಲಿನ ನೈಜತೆಯ ವಿಷಯ ಹಾಗು ವಿಚಾರಗಳನ್ನು ಸಾರ್ವಜನಿಕರೊಂದಿಗೆ ಸಮಾಲೋಚಿಸುವ ಉದ್ಧೇಶದಿಂದ ಆರಂಭವಾಗಿರುವುದು.

ಪತ್ರಿಕಾ ಚಂದಾದಾರಿಕೆಯ ವಾರ್ಷಿಕ ಶುಲ್ಕ ಕೇವಲ ರೂ.600/- ಹಾಗು ಇ-ಪೇಪರ್ ವಾರ್ಷಿಕ ಚಂದಾದಾರಿಕೆ ಕೇವಲ ರೂ.300/- ಮತ್ತು ಅವರು ನೀಡಿದ ವಿಳಾಸಕ್ಕೆ ಪತ್ರಿಕೆ ಬರುತ್ತದೆ. ಸ್ಮಾರ್ಟ್ ಫೋನ್ ಇಲ್ಲದ ಸಾರ್ವಜನಿಕರ ನೋಂದಣಿಯನ್ನು ವಿದ್ಯಾರ್ಥಿಗಳು ಅವರಿಂದ ಹಣ ಪಡೆದು ತಮ್ಮ ಮೊಬೈಲಿನಲ್ಲೇ ಮಾಡಬಹುದು. ಇಲ್ಲವಾದಲ್ಲಿ ಪತ್ರಿಕಾ ಸಂಸ್ಥೆಗೆ ನೇರವಾಗಿ ಕರೆಮಾಡಿ ನೋಂದಣಿ ಮಾಡಿಸಿಕೊಳ್ಳಬಹುದು.

ಪತ್ರಿಕೆಯನ್ನು ಯಾವಾಗ ಬೇಕಾದರು ಪಡೆಯಲು ಅವಕಾಶವಿರುತ್ತದೆ. ಹಾಗೆಯೇ ನೇರ ಪತ್ರಿಕೆಯ ಆಯಾ ವಾರ್ಷಿಕದ ಹಿಂದಿನ ಸಂಚಿಕೆಗಳು ಪಿಡಿಎಫ್ ರೂಪದಲ್ಲಿ ಅವರ ಮೊಬೈಲ್ ಅಥವಾ ಇಮೇಲ್'ಗೆ ಕಳುಹಿಸಲಾಗುತ್ತದೆ.

"ಸಮಾಜದ ವಾಸ್ತವದ ನೈಜತೆಯನ್ನರಿಯಲು ವಿದ್ಯಾರ್ಥಿಗಳಿಂದ, ಯುವಜನತೆಗಾಗಿ, ಸಮಾಜಕ್ಕೋಸ್ಕರ ಇರುವ ವೇದಿಕೆ"..